ಕೋಲ್‍ರಿಜ್, ಸ್ಯಾರ
1802-1852. ಸ್ಯಾಮ್ಯುಯಲ್ ಟೇಲರ್ ಕೋಲ್‍ರಿಜ್‍ನ ಏಕೈಕ ಪುತ್ರಿ. ಕೆಸ್‍ವಿಕ್‍ನ ಗ್ರೆಟಹಾಲ್‍ನಲ್ಲಿ ಹುಟ್ಟಿದಳು. ತನ್ನ ಬಾಲ್ಯವನ್ನು ಸೌದೀ ಮತ್ತು ವಡ್ರ್ಸ್‍ವರ್ತರ ಬಳಿ ಕಳೆದಳು. 1829ರಲ್ಲಿ ತನ್ನ ಸೋದರಿಕೆ ಸಂಬಂಧದಲ್ಲಿ ಹೆನ್ರಿ ನೆಲ್ಸನ್ ಕೋಲ್‍ರಿಜ್‍ನನ್ನು ಮದುವೆಯಾಗಿ ಹ್ಯಾಂಪ್‍ಸ್ಟೆಡ್‍ನಲ್ಲಿ ವಾಸಿಸತೊಡಗಿದಳು. ಈಕೆ ದೊಬ್ರಿಜ್óಹಾಫರ್‍ನ ಅಕೌಂಟ್ ಆಫ್ ದಿ ಅಬಿಪೋನ್ಸ್ (1822), ಮೆಮಾಯಿರ್ಸ್ ಆಫ್ ದಿ ಷೆವಲಿಯರ್ ಬೆಯಾರ್ಡ್ (1825) ಎಂಬ ಗ್ರಂಥಗಳನ್ನು ಭಾಷಾಂತರಿಸಿದಳು. ಈಕೆಯ ಸ್ವಂತ ರಚನೆಯೆಂದರೆ ಪ್ರೆಟಿ ಲೆಸನ್ಸ್ ಇನ್ ವರ್ಸ್ ಫಾರ್ ಗುಡ್ ಚಿಲ್ಡ್ರನ್ (1834) ಮತ್ತು ಫಾಂಟಾಸ್‍ಮಿಯಾನ್ (1837) ಎಂಬ ಯಕ್ಷಿಣಿ ಕಥೆ. ಈ ಎರಡೂ ಈಕೆಗೆ ಖ್ಯಾತಿಯನ್ನು ತಂದ ಗ್ರಂಥಗಳು. ಅಲ್ಲದೆ ತನ್ನ ತಂದೆಯ ಅನೇಕ ಕೃತಿಗಳನ್ನು ಈಕೆ ಸಂಪಾದಿಸಿ ಪ್ರಕಟಿಸಿದಳು.										*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ